Saturday, February 13, 2010

ಪದೇ ಪದೇ ಕಾಡೊ ನೆನಪಿನಿಂದ ದೂರ ಓಡೊ ಕಾತುರದಲ್ಲಿ.

ನೆನಪುಗಳೆ ಹಾಗಲ್ವಾ? ಯಾವುದಾದರು, ಯಾರಿಂದಾದರು, ಎನಾದರು,ಯಾವಗಲಾದರು ಪಡೆದುಕೊಂಡದ್ದಾದರೆ ಮರೆಯೋಕೆ ಆಗಲ್ಲ, ಈ ಮರೆಯೋ ಪ್ರಯತ್ನದಲ್ಲಿ ಆ ನೆನಪೇ ಎಲ್ಲರನ್ನ ಮೂರ್ಖರನ್ನಾಗಿಸುತ್ತೆ. ಈ ನೆನಪುಗಳಿಗೆ ಇಷ್ಟು ಶಕ್ತಿ ಕೊಟ್ಟಿದ್ಯಾರು? ನೆನಪು ನಮ್ಮನ್ನ ಆಳತ್ತಾ? ಅದು ನಮ್ಮನ್ನ ಎನ್ ಬೇಕಾದ್ರು ಮಾಡತ್ತ? ಎನ್ ಬೇಕಾದ್ರು ಕೇಳತ್ತ? ಅದಕ್ಕೆ ಅದ್ದುಬಸ್ತಿಲ್ಲವ? ಅದೇನನ್ಕೊಂಡಿದೆ? ಹೇಳೋರು ಕೇಳೋರು ಯಾರು ಇಲ್ವ? ಈ ಪ್ರಶ್ನೆಗೆಲ್ಲ ಆ ನೆನಪೆ ಉತ್ತರಿಸಬೇಕು ನಿಜ, ಆದ್ರೆ ಉತ್ತರ ಸಿಗದಾಗ ಎನ್ ಮಾಡೋದು? ಓಡೊಗೊದು!!??? ಅದು ನಾನ್ ಅನ್ಕೊಂಡ ಉಪಾಯ, ಅದ್ರೆ ಅದು ಅಷ್ಟು ಸುಲಭದ್ದಲ್ಲ. ಓಡೊಗೊದು ಯಾವತ್ತು ನನಗೆ ಒಳ್ಳೆ ದಾರಿ ಅಗಲೇ ಇಲ್ಲ. ನೆನಪುಗಳು ಬೆನ್ನಟ್ಟುತ್ತಿವೆ, ಬೆನ್ನಟ್ಟುತ್ತಿವೆ ಬಿಡದಂತೆ, ಬಿಡದಂತೆ ಎಂದಿಗು. ಈ ಬಿಡದ ನೆನಪುಗಳ ಜೊತೆಜೊತೆಯಲ್ಲಿಯೆ ಭವಿಷ್ಯ ಕಟ್ಟೊ ಕಾತುರ. ಭವಿಷ್ಯದ ಕನಸುಗಳು, ಕಾಡುವ ನೆನಪು, ಗೊತ್ತಿದ್ದು ಮತ್ತೆ ಮತ್ತೆ ಮಾಡೋ ಅದೇ ತಪ್ಪುಗಳು, ಎಲ್ಲೋ ಎಲ್ಲಿಂದಲೋ ಬರುವ ಸಡಗರ, ಚೈತನ್ಯ. ಇದ್ದೆಲ್ಲದರ ಗುಂಗಲ್ಲೆ ನನ್ನ ಬದುಕು. ನೆನಪುಗಳು ನನ್ನ ಬಿಡೋದಿಲ್ವ? ಗೊತ್ತಿಲ್ಲ!! ಅದ್ರೆ ನನಗೆ ಬೇಡದ ಈ ನೆನಪುಗಳಿಂದ ದೂರ ಓಡೋ ಕಾತುರ ಅದಕ್ಕೆ ಸಿಗಲಾರದಷ್ಟು ದೂರ, ತುಂಬಾನೆ ದೂರ.

Friday, August 7, 2009

ಸುಮ್ ಸುಮ್ನೆ

ಡುಮ್ಕು ಡುಮ್ಮು
ಸುಮ್ ಸುಮ್ನೆ ಬರ್ದಿರೊ ಪ್ರೆಮ ಪತ್ರ ನಿನ್ಗೆ ಮಾತ್ರ!??
ಇದು ನಾನು ನಿನ್ಗೆ ಬರಿತಿರೊ ಮೊದಲ್ನೆ ಪ್ರೆಮ್ಪತ್ರ ಅದಕ್ಕೆ ಏನೋ ಎಲ್ಲ ಪ್ರೇಮಿಗಳು ಬರ್ಯೊ ಪ್ರೆಮ್ ಪತ್ರದ ತರ ನನ್ದಿರಲ್ಲ?
ನಿಂಗೆ ಆಶ್ಚರ್ಯ ಆಗ್ಬಹುದು ಯಾವ ಪ್ರೇಮಿಗಳ ಪ್ರೆಮ್ ಪತ್ರ ನಾನು ಓದಿರ್ಬಹೂದೂಂತ ಅದೇನಿಲ್ಲ ಬಿಡು ಅದ್ ಇನ್ನೊಂದ್ ಕತೆ ನಿನ್ ಸಿಗ್ತ್ಯಲ್ಲ ಆಗ ಹೇಳ್ತೀನಿ, ಅಂದಂಗೆ ನೀನ್ ಸಿಗ್ತ್ಯ ತಾನೆ, hmmm ಆಮೇಲೆ ಏನ್ ಬರ್ಯೋದು hmm ಬರ್ಯೋದ್ ಬ್ಯಾಡ ಆಮೇಲೆ ನೀನ್ ಸಿಗ್ತ್ಯ ತಾನೆ, ಬ್ಯಾಡ ಓವರ್ ಆಗ್ತಿದ್ಯಲ್ಲ ಇದು ಒಂಚೂರು, ಎಯ್ ಅದನ್ನೆಲ್ಲ ಬರಿ ಅಂತಾ ಹೇಳಿದ್ನ Idiot....

ಸರಿ ಬಿಡು ನೀನ್ ಸಿಗ್ತ್ಯಲ್ಲ....

ಇಂತಿ ನಿನ್ನ ಪ್ ರ್ ಈ ತ್ ಇ ಯ್ ಅ

ನಾನ್ಯಾರೋ