Saturday, February 13, 2010

ಪದೇ ಪದೇ ಕಾಡೊ ನೆನಪಿನಿಂದ ದೂರ ಓಡೊ ಕಾತುರದಲ್ಲಿ.

ನೆನಪುಗಳೆ ಹಾಗಲ್ವಾ? ಯಾವುದಾದರು, ಯಾರಿಂದಾದರು, ಎನಾದರು,ಯಾವಗಲಾದರು ಪಡೆದುಕೊಂಡದ್ದಾದರೆ ಮರೆಯೋಕೆ ಆಗಲ್ಲ, ಈ ಮರೆಯೋ ಪ್ರಯತ್ನದಲ್ಲಿ ಆ ನೆನಪೇ ಎಲ್ಲರನ್ನ ಮೂರ್ಖರನ್ನಾಗಿಸುತ್ತೆ. ಈ ನೆನಪುಗಳಿಗೆ ಇಷ್ಟು ಶಕ್ತಿ ಕೊಟ್ಟಿದ್ಯಾರು? ನೆನಪು ನಮ್ಮನ್ನ ಆಳತ್ತಾ? ಅದು ನಮ್ಮನ್ನ ಎನ್ ಬೇಕಾದ್ರು ಮಾಡತ್ತ? ಎನ್ ಬೇಕಾದ್ರು ಕೇಳತ್ತ? ಅದಕ್ಕೆ ಅದ್ದುಬಸ್ತಿಲ್ಲವ? ಅದೇನನ್ಕೊಂಡಿದೆ? ಹೇಳೋರು ಕೇಳೋರು ಯಾರು ಇಲ್ವ? ಈ ಪ್ರಶ್ನೆಗೆಲ್ಲ ಆ ನೆನಪೆ ಉತ್ತರಿಸಬೇಕು ನಿಜ, ಆದ್ರೆ ಉತ್ತರ ಸಿಗದಾಗ ಎನ್ ಮಾಡೋದು? ಓಡೊಗೊದು!!??? ಅದು ನಾನ್ ಅನ್ಕೊಂಡ ಉಪಾಯ, ಅದ್ರೆ ಅದು ಅಷ್ಟು ಸುಲಭದ್ದಲ್ಲ. ಓಡೊಗೊದು ಯಾವತ್ತು ನನಗೆ ಒಳ್ಳೆ ದಾರಿ ಅಗಲೇ ಇಲ್ಲ. ನೆನಪುಗಳು ಬೆನ್ನಟ್ಟುತ್ತಿವೆ, ಬೆನ್ನಟ್ಟುತ್ತಿವೆ ಬಿಡದಂತೆ, ಬಿಡದಂತೆ ಎಂದಿಗು. ಈ ಬಿಡದ ನೆನಪುಗಳ ಜೊತೆಜೊತೆಯಲ್ಲಿಯೆ ಭವಿಷ್ಯ ಕಟ್ಟೊ ಕಾತುರ. ಭವಿಷ್ಯದ ಕನಸುಗಳು, ಕಾಡುವ ನೆನಪು, ಗೊತ್ತಿದ್ದು ಮತ್ತೆ ಮತ್ತೆ ಮಾಡೋ ಅದೇ ತಪ್ಪುಗಳು, ಎಲ್ಲೋ ಎಲ್ಲಿಂದಲೋ ಬರುವ ಸಡಗರ, ಚೈತನ್ಯ. ಇದ್ದೆಲ್ಲದರ ಗುಂಗಲ್ಲೆ ನನ್ನ ಬದುಕು. ನೆನಪುಗಳು ನನ್ನ ಬಿಡೋದಿಲ್ವ? ಗೊತ್ತಿಲ್ಲ!! ಅದ್ರೆ ನನಗೆ ಬೇಡದ ಈ ನೆನಪುಗಳಿಂದ ದೂರ ಓಡೋ ಕಾತುರ ಅದಕ್ಕೆ ಸಿಗಲಾರದಷ್ಟು ದೂರ, ತುಂಬಾನೆ ದೂರ.

2 comments:

  1. hi
    right now my mobile wouldn't support. i will go through ur blog and comment as soon as possible

    pl. visit my kannada poetry blog:
    www.badari-poems.blogspot.com

    - badarinath palavalli

    ReplyDelete
  2. ನಿಜಾನ, ನೆನಪುಗಳೇ ಹಾಗೆ ಬಿಡಿ.........................!

    ReplyDelete